Posts

Showing posts from September, 2020

ಪೊಲೀಸ್ ಇಲಾಖೆಯಲ್ಲಿ ಸುಮಾರು 36,000ಕ್ಕೂ ಅಧಿಕ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

Image
  ವೀಕ್ಷಕರೇ ನಮಸ್ಕಾರ ಪೊಲೀಸ್ ಇಲಾಖೆಯಿಂದ ಮತ್ತೊಂದು ಬೃಹತ್ ನೇಮಕಾತಿ ನಡೆಯಲಿದೆ. ಹೌದು ಪೊಲೀಸ್ ಇಲಾಖೆಯಲ್ಲಿ ಸುಮಾರು 36,000ಕ್ಕೂ  ಅಧಿಕ ಸಿವಿಲ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿ ನಡಿಸಬೇಕು ಎಂದು ಕರ್ನಾಟಕ ಸರ್ಕಾರದಿಂದ ಅಧಿಕೃತ್ವಾಗಿ ಕರ್ನಾಟಕ ರಾಜ್ಯ ಪತ್ರ ಹೊರಡಿಸಿದೆ. ಇದರಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ: 36,261 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್. ಈ ಹುದ್ದೆಗಳ ಪೈಕಿ 67.5% ಹುದ್ದೆಗಳು ಪುರುಷರಿಗೆ.ಹಾಗೂ 22.5% ಹುದ್ದೆಗಳು ಮಹಿಳೆಯರಿಗೆ  ಹಾಗೂ ಉಳಿದ 10% ಹುದ್ದೆಗಳು CAR, DAR, KSRP ಮತ್ತು KSISF ವೃಂದದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವರಿಗೆ. ಅಂದರೆ ಸಂಖ್ಯೆಯಲ್ಲಿ ಹೇಳುವಾದದರೆ 24,476 ಹುದ್ದೆಗಳು ಪುರುಷರಿಗೆ ಹಾಗೂ 8159 ಹುದ್ದೆಗಳು ಮಹಿಳೆಯರಿಗೆ ಮತ್ತು ಉಳಿದ 3626 ಹುದ್ದೆಗಳು CAR, DAR, KSRP ಮತ್ತು KSISF ವೃಂದದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವರಿಗೆ. ಈ ಕುರಿತು ತಿದ್ದುಪಡಿಯ ಅಂತಿಮ ನಿಯಮ  (5-9-2020 ) ಗೆಜೆಟ್ (ರಾಜ್ಯಪತ್ರ) ದಲ್ಲಿ ಪ್ರಕಟಿಸಲಾಗಿದೆ.!! ಅತೀ ಶೀಘ್ರದಲ್ಲಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವವರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿ. (All The best👍).

ಪ್ರಧಾನಿ ಮೋದಿಯವರ ವೈಯಕ್ತಿಕ ಟ್ವಿಟರ್ ಅಕೌಂಟ್ ಹ್ಯಾಕ್.

Image
  ಪ್ರಧಾನಿ ಮೋದಿಯವರ ವೈಯಕ್ತಿಕ ಟ್ವಿಟರ್ ಅಕೌಂಟ್ ಹ್ಯಾಕ್. ವೀಕ್ಷಕರೇ pubg ಸೇರಿದಂತೆ 118 ಚೀನೀ ಆ್ಯಪ್‌ಗಳನ್ನ ನಿಷೇಧಿಸಿ ಇನ್ನು ಒಂದು ದಿನ ಆಗುವದರಲ್ಲೇ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಅದೇನೆಂದರೆ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್‌ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.  ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟ್ಟರ್ ಅಕೌಂಟನನ್ನ ಹ್ಯಾಕ್ ಮಾಡಿ ಅದರಲ್ಲಿ ಟ್ವೀಟ್‌ ಮಾಡುವದರ ಮೂಲಕ ಅನುಯಾಯಿಗಳಿಗೆ ಕ್ರಿಪ್ಟೋಕರೆನ್ಸಿ ಮೂಲಕ ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಳಿಕೊಂಡಿವೆ.    ಈ ಘಟನೆಯಿಂದ ಯಾವುದೇ ಪರಿಣಾಮ ಬೀರದ ಪಿಎಂ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ 61 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಇಂತಹ ಘಟನೆ ಇದೆ ಮೊದಲು ಅಲ್ಲ ಹಿಂದೆ ಬಹಳಷ್ಟು ಮಹಾನ್ ವ್ಯಕ್ತಿಗಳ ಅಕೌಂಟ್ ನನ್ನ ಹ್ಯಾಕ್ ಮಾಡಲಾಗಿತ್ತು. ಯು.ಎಸ್. ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್, ಮಾಜಿ ಯು.ಎಸ್. ಅಧ್ಯಕ್ಷ ಬರಾಕ್ ಒಬಾಮ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ ಸೇರಿದಂತೆ ವೇದಿಕೆಯ ಕೆಲವು ಉನ್ನತ ಧ್ವನಿಗಳನ್ನು ಅಪಹರಿಸಲು ಹ್ಯಾಕರ್ಸ್ ಜುಲೈನಲ್ಲಿ ಟ್ವಿಟ್ಟರನ ಆಂತರಿಕ ವ್ಯವಸ್ಥೆಗಳನ್ನು ಪ್ರವೇಶಿಸಿದ್ದರು ಮತ್ತು ಡಿಜಿಟಲ್ ಕರೆನ್ಸಿಯನ್ನು ಕೋರಲು ಅವುಗಳನ್ನು ಬಳಸಿದರು. “ನಾವು ಪರಿಸ್ಥಿತಿಯನ್ನು ಸಕ್ರಿಯವಾಗಿ ತನಿಖೆ ಮಾಡುತ್ತಿದ್ದೇವ...

PUBG ಸೇರಿದಂತೆ 118 ಆ್ಯಪ್​ಗಳು ಭಾರತದಲ್ಲಿ ಬ್ಯಾನ್

Image
      PUBG ಸೇರಿದಂತೆ 118 ಆ್ಯಪ್​ಗಳು ಭಾರತದಲ್ಲಿ ಬ್ಯಾನ್..!      ವೀಕ್ಷಕರೇ ನಮಸ್ಕಾರ ಮೊದಲ ಸುತ್ತಿನಲ್ಲಿ tiktok app ಸೇರಿದಂತೇ 59 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ  "ಭಾರತದ ಸಾರ್ವಭೌಮತ್ವ ಮತ್ತು ಗೌಪ್ಯತೆಗೆ ಹಾನಿ ಮಾಡುವ ಅಪ್ಲಿಕೇಶನ್‌ಗಳು ಎಂದು ಗುರುತಿಸಿ ಚೀನೀ appsಗಳನ್ನ ನಿಷೇಧಿಸಲಾಗಿತ್ತು. ದತ್ತಾಂಶ ಸುರಕ್ಷತೆಯ ಬಗ್ಗೆ ನಿಷೇಧಿಸಬಹುದಾದ ಪಿ.ಯು.ಬಿ.ಜಿ ಸೇರಿದಂತೆ ಇನ್ನೂ 275 ಚೀನೀ ಆ್ಯಪ್‌ಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಇಟಿ ಕಳೆದ ತಿಂಗಳು ವರದಿ ಮಾಡಿತ್ತು.   ಹಿಂದಿನ ತಿಂಗಳು ಸರ್ಕಾರ ಹೇಳಿದಂತೆಯೇ ಈಗ  118 ಚೀನೀ ಆ್ಯಪ್‌ಗಳನ್ನು ನಿಷೇಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.  ಹೊಸ ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ PUBG, ಮತ್ತು ಬೈದು, ಟೆನ್ಸೆಂಟ್ ಅಪ್ಲಿಕೇಶನ್‌ಗಳು ಸೇರಿವೆ. ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಹೊಸ ಉದ್ವಿಗ್ನತೆಯ ನಂತರ ಇದು ಕಂಡು ಬಂದಿದೆ. ವೀಕ್ಷಕರೇ ನಿಮಗೇ ಒಂದು ಪ್ರಶ್ನೆ ಭಾರತ ಸರ್ಕಾರ ತೆಗೆದುಕೊಂಡು ಈ ನಿರ್ಧಾರವನ್ನ ನೀವು ಎಷ್ಟು ಬೆಂಬಲಸುತ್ತಿರಿ. ನಮಗೆ share ಮಾಡುವ ಮೂಲಕ ತಿಳಿಸಿ ಧನ್ಯವಾದಗಳು. ನಿಷೇಧಿಸಲಾದ 118 ಚೀನೀ apps ಗಳು ಕೆಳಗಿನಂತಿವೆ: 1. APUS Launcher Pro- Theme, Live Wallpapers, Smart 2. APUS La...