ಪೊಲೀಸ್ ಇಲಾಖೆಯಲ್ಲಿ ಸುಮಾರು 36,000ಕ್ಕೂ ಅಧಿಕ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ
ವೀಕ್ಷಕರೇ ನಮಸ್ಕಾರ ಪೊಲೀಸ್ ಇಲಾಖೆಯಿಂದ ಮತ್ತೊಂದು ಬೃಹತ್ ನೇಮಕಾತಿ ನಡೆಯಲಿದೆ.
ಹೌದು ಪೊಲೀಸ್ ಇಲಾಖೆಯಲ್ಲಿ ಸುಮಾರು 36,000ಕ್ಕೂ ಅಧಿಕ ಸಿವಿಲ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿ ನಡಿಸಬೇಕು ಎಂದು ಕರ್ನಾಟಕ ಸರ್ಕಾರದಿಂದ ಅಧಿಕೃತ್ವಾಗಿ ಕರ್ನಾಟಕ ರಾಜ್ಯ ಪತ್ರ ಹೊರಡಿಸಿದೆ.
ಇದರಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ: 36,261 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್. ಈ ಹುದ್ದೆಗಳ ಪೈಕಿ 67.5% ಹುದ್ದೆಗಳು ಪುರುಷರಿಗೆ.ಹಾಗೂ 22.5% ಹುದ್ದೆಗಳು ಮಹಿಳೆಯರಿಗೆ ಹಾಗೂ ಉಳಿದ 10% ಹುದ್ದೆಗಳು CAR, DAR, KSRP ಮತ್ತು KSISF ವೃಂದದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವರಿಗೆ.
ಅಂದರೆ ಸಂಖ್ಯೆಯಲ್ಲಿ ಹೇಳುವಾದದರೆ 24,476 ಹುದ್ದೆಗಳು ಪುರುಷರಿಗೆ ಹಾಗೂ 8159 ಹುದ್ದೆಗಳು ಮಹಿಳೆಯರಿಗೆ ಮತ್ತು ಉಳಿದ 3626 ಹುದ್ದೆಗಳು CAR, DAR, KSRP ಮತ್ತು KSISF ವೃಂದದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವರಿಗೆ.
ಈ ಕುರಿತು ತಿದ್ದುಪಡಿಯ ಅಂತಿಮ ನಿಯಮ (5-9-2020) ಗೆಜೆಟ್ (ರಾಜ್ಯಪತ್ರ) ದಲ್ಲಿ ಪ್ರಕಟಿಸಲಾಗಿದೆ.!!
ಅತೀ ಶೀಘ್ರದಲ್ಲಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವವರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿ. (All The best👍).
Comments
Post a Comment